Top News

ಎಚ್‌ಎಂಟಿ ಕೈಗಡಿಯಾರ ಖರೀದಿಸಲು ಮುಗಿಬಿದ್ದ ಜನ; ಕಿಲೋಮೀಟರ್‌ಗಟ್ಟಲೆ ಸರದಿ ಸಾಲು

ಬೆಂಗಳೂರು, ಆ.15- ಎಚ್‌ಎಂಟಿ ಕೈಗಡಿಯಾರ ಖರೀದಿಸಲು ಸಾರ್ವಜನಿಕರು ಮುಗಿಬಿದ್ದಿದ್ದು, ಕಿಲೋಮೀಟರ್‌ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಇದರಿಂದ ಎಚ್‌ಎಂಟಿ ಗಡಿಯಾರಕ್ಕೆ ಗತವೈಭವ ಮರಳಿ ಬಂದಂತಾಗಿದೆ. ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ವಿಶೇಷ ವಾಚ್‌ಗಳನ್ನು ಎಚ್‌ಎಂಟಿ ಬಿಡುಗಡೆ ಮಾಡಿದೆ. ಆ ವಾಚ್‌ಗಳನ್ನು ಖರೀದಿಸಲು ಇಂದು ಜನ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಕಂಡುಬಂದಿತು. ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಎಚ್‌ಎಂಟಿ ವಾಚ್‌ ಅನ್ನು ವಿಶೇಷವಾಗಿ ಬಿಡುಗಡೆಗೊಳಿಸಲಾಗಿದ್ದು, ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ವಾಚ್‌…

Read More

ಮುಂಜಾಗ್ರತಾ ಕ್ರಮವಾಗಿ ಡಾಲರ್ಸ್‌ ಕಾಲೋನಿ ನಿವಾಸದಿಂದಲೇ ವಾಟಾಳ್‌ ನಾಗರಾಜ್‌ ವಶಕ್ಕೆ

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹೋರಾಟಕ್ಕೆ ಮುಂದಾಗಿದ್ದಾರೆ. ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಅವರ ಡಾಲರ್ಸ್‌ ಕಾಲೋನಿ ನಿವಾಸದಿಂದಲೇ ವಶಕ್ಕೆ ಪಡೆದಿದ್ದಾರೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿತ್ತು. ಆದರೆ…

Read More

ಪ್ರಜ್ವಲ್ ರೇವಣ್ಣ ಸೆಲ್ ಮೇಲೆ ಸಿಸಿಬಿ ದಾಳಿ: ಮೊಬೈಲ್ ಹಾಗೂ ಪೆನ್​ಡ್ರೈವ್‌ನಲ್ಲಿ ಪತ್ತೆಯಾದ ಅಶ್ಲೀಲ ವಿಡಿಯೋಗಳುಪ್ರಜ್ವಲ್ ರೇವಣ್ಣ ಸೆಲ್ ಮೇಲೆ ಸಿಸಿಬಿ ದಾಳಿ: ಮೊಬೈಲ್ ಹಾಗೂ ಪೆನ್​ಡ್ರೈವ್‌ನಲ್ಲಿ ಪತ್ತೆಯಾದ ಅಶ್ಲೀಲ ವಿಡಿಯೋಗಳು

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿಯ ವೇಳೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಮತ್ತು ಪೆನ್ ಡ್ರೈವ್ ಪತ್ತೆಯಾಗಿರುವುದು ದೊಡ್ಡ ಸಂಚಲನ ಮೂಡಿಸಿದೆ. ಜೈಲಿನ ವಿಐಪಿ ಸೆಲ್‌ನಲ್ಲಿ ಸಿಕ್ಕ ಈ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರಿಶೀಲಿಸಿದಾಗ, ಅವುಗಳಲ್ಲಿ ಯುವತಿಯರ ಅಶ್ಲೀಲ ವಿಡಿಯೋಗಳು ಹಾಗೂ ಫೋಟೋಗಳ ಕಟ್ಟಿಂಗ್‌ಗಳು ಇರುವುದು ಕಂಡುಬಂದು ಪೊಲೀಸ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಪ್ರಜ್ವಲ್ ಬಳಿ ನೀಲಿ ಬಣ್ಣದ ರೆಡ್‌ಮಿ…

Read More

ಗದಗ ಜಿಲ್ಲೆ ಸಂಪೂರ್ಣ ಬರದ ಸಂಕಷ್ಟದಲ್ಲಿ; ಅರ್ಹ ಪ್ರತಿಯೊಬ್ಬ ರೈತನಿಗೂ ಪರಿಹಾರ ತಲುಪಲಿ: ಸಚಿವ ಬಸವರಾಜ ರಾಯರಡ್ಡಿ

ನರಗುಂದ ತಾಲ್ಲೂಕಿನ ಬರ ಪರಿಸ್ಥಿತಿ ಅವಲೋಕನ ಸಭೆ – ಶೇ. ೭೦ರಿಂದ ೭೫ರಷ್ಟು ಬೆಳೆ ಹಾನಿ ಅಂದಾಜು ನರಗುಂದ: ಗದಗ ಜಿಲ್ಲೆ ಸಂಪೂರ್ಣವಾಗಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ವಾಡಿಕೆ ಮಳೆಗಿಂತ ಜಿಲ್ಲೆಯಲ್ಲಿ ಶೇ. ೩೨ರಷ್ಟು ಮಳೆ ಕೊರತೆಯಾಗಿದೆ. ಬೆಳೆ ಹಾನಿಯ ನಿಖರ ಸಮೀಕ್ಷೆ ನಡೆಸಿ, ಅರ್ಹ ಪ್ರತಿಯೊಬ್ಬ ರೈತನಿಗೂ ಸರ್ಕಾರದ ಪರಿಹಾರ ತಲುಪುವಂತೆ ಅಧಿಕಾರಿಗಳು ಸಮಗ್ರ ಹಾಗೂ ವಾಸ್ತವಿಕ ವರದಿ ಸಲ್ಲಿಸಬೇಕು ಎಂದು ಸಂಪುಟ ದರ್ಜೆ ಸಚಿವ ಬಸವರಾಜ ರಾಯರಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನರಗುಂದ…

Read More

ಕಬಿನಿ ಜಲಾಶಯಕ್ಕೆ ಒಳಹರಿವು ಮತ್ತೆ ಹೆಚ್ಚಳ; 5 ಸಾವಿರ ಕ್ಯುಸೆಕ್‌ ನೀರು ನದಿಗೆ – ಡ್ಯಾಂನಲ್ಲಿ ಎಷ್ಟಿದೆ ನೀರು?

ಮೈಸೂರಿನ ಎಚ್.ಡಿ.ಕೋಟೆಯ ಕಬಿನಿ ಜಲಾಶಯಕ್ಕೆ ಒಳಹರಿವು 14 ಸಾವಿರ ಕ್ಯುಸೆಕ್‌ಗೆ ಹೆಚ್ಚಾಗಿದೆ. 2284 ಅಡಿ ಗರಿಷ್ಠ ಮಟ್ಟದ ಅಣೆಕಟ್ಟೆಯಲ್ಲಿ ಸದ್ಯ 2282 ಅಡಿ ನೀರಿದ್ದು (18 ಟಿಎಂಸಿ), ಕ್ರಸ್ಟ್ ಗೇಟ್ ಹಾಗೂ ವಿದ್ಯುತ್ ಘಟಕಗಳ ಮೂಲಕ ನದಿ ಮತ್ತು ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಈವರೆಗೆ ತಮಿಳುನಾಡಿಗೆ 10.60 ಟಿಎಂಸಿ ನೀರು ಹರಿದುಹೋಗಿದ್ದು, ವಯನಾಡಿನಲ್ಲಿ ಸೋಮವಾರದಿಂದ ಮಳೆ ಮತ್ತೆ ಚುರುಕಾಗುವ ಸಾಧ್ಯತೆಯಿದೆ. ಮೈಸೂರು: ಎಚ್‌.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯಕ್ಕೆ ಒಳಹರಿವು ಮತ್ತೆ ಹೆಚ್ಚಾಗಿದ್ದು, ಸದ್ಯ 14…

Read More

ಪೀಣ್ಯ ದಾಸರಹಳ್ಳಿ: ಮಹಿಳೆಯ ಅಸ್ಥಿಪಂಜರ ಪತ್ತೆ

ಪೀಣ್ಯ ದಾಸರಹಳ್ಳಿ: ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ಅದರ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಮಹಿಳೆ ದಾಕ್ಷಾಯಣಿ ಅವರ ಅಸ್ಥಿಪಂಜರ ಎಂಬುದು ಕಂಡುಬಂದಿದೆ ಎಂದು ಮೂಲಗಳು ಹೇಳಿವೆ. ‘ಮಹಿಳೆ ಮೃತಪಟ್ಟು ಒಂದೂವರೆ ವರ್ಷ ಕಳೆದಿದೆ. ಇದೀಗ ಅಸ್ಥಿಪಂಜರವು ದೊರೆತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ದಾಕ್ಷಾಯಣಿ ಅವರ ಪತಿ ಉಮೇಶ್‌ 10 ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ಅನಾರೋಗ್ಯದಿಂದ ಪುತ್ರ ಸಹ ಮೃತಪಟ್ಟಿದ್ದರು. ದಾಕ್ಷಾಯಣಿ ಅವರು ಒಬ್ಬರೇ ಮನೆಯಲ್ಲಿ ವಾಸವಿದ್ದರು. ಶೌಚಾಲಯಕ್ಕೆ…

Read More

ನೈಸ್‌‍ ರಸ್ತೆ ಟೋಲ್‌ ಸ್ಥಗಿತಕ್ಕೆ ಎಚ್‌ಡಿಕೆ ಆಗ್ರಹ

ಬೆಂಗಳೂರು,ಆ.8- ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯ ಪೀಠ ಜು.29 ರಂದು ಬಿಎಂಐಸಿ ಯೋಜನೆ ಕುರಿತಂತೆ ನೀಡಿರುವ ತೀರ್ಪಿನ ಬಗ್ಗೆ ರಾಜ್ಯಸರ್ಕಾರ ಏಕೆ ಮೌನ ವಹಿಸಿದೆ ಎಂದು ಪ್ರಶ್ನಿಸಿದ ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ನೈಸ್‌‍ ರಸ್ತೆಯ ಟೋಲ್‌ ಸಂಗ್ರಹವನ್ನು ಸ್ಥಗಿತಗೊಳಿಸಲು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಐಸಿ ಕುರಿತಂತೆ ಹೈಕೋರ್ಟ್‌ನ ಆದೇಶವನ್ನು ಅನುಷ್ಠಾನಗೊಳಿಸಲು ಒತ್ತಾಯಿಸಿ ರಾಜ್ಯಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಒಂದು ವಾರ ಹತ್ತು ದಿನಗಳ ಗಡುವು ನೀಡಲಾಗುವುದು ಎಂದು ಹೇಳಿದರು. ಸರ್ಕಾರದ…

Read More

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಕ್ಕೇ ಸಿಗುತ್ತೆ : ಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಹಾಗೂ ಮುಂಚೂಣಿ ಪ್ರಾತಿನಿಧ್ಯ ನೀಡುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಸದಾ ಬದ್ಧವಾಗಿದ್ದು, ಮುಂದಿನ ಸಂಪುಟ ವಿಸ್ತರಣೆ ವೇಳೆ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿ ಹೆಚ್ಚು ಶಕ್ತಿ ತುಂಬಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕುರಿತು ಮಾತನಾಡಿದ್ದಕ್ಕೆ ಪ್ರತಿಯಾಗಿ, ‘ಕರ್ನಾಟಕ ಸಂಪುಟದಲ್ಲಿ ಮಹಿಳೆಯರಿಲ್ಲ’ ಎಂದು ಕೇಂದ್ರ ಸಚಿವ ಕಿರಣ್…

Read More

ಮತ್ತೊಂದು ಭೀಕರ ಅಪಘಾತ: ಪ್ರಪಾತಕ್ಕೆ ಉರುಳಿದ ಬಸ್: 7 ಪ್ರಯಾಣಿಕರು ದುರ್ಮರಣ

ಶಿಮ್ಲಾ: ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ 7 ಜನರು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದಿದೆ. ಪರಿಣಾಮ ಏಳು ಪ್ರಯಾಣಿಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈರಾಗಢ-ಚಂಬಾ ಮಾರ್ಗದ ದೇವಿಕೋಠಿ ಬಳಿ ಈ ದುರಂತ ಸಂಭವಿಸಿದೆ. ಬೈರಾಗಢದಿಂದ ಚಂಬಾಗೆ ತೆರಳುತ್ತಿದ್ದ ಖಾಸಗಿ ಬಸ್, ದೇವಿಕೋಠಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ…

Read More

ಚಿತ್ರದುರ್ಗ: ಕೇಳೋರಿಲ್ಲದಂತಾದ ಟೊಮೆಟೊ..!

ಚಿತ್ರದುರ್ಗ: ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಗಳು ಬಾಡುತ್ತಿವೆ. ಆದರೆ, ಮಳೆ ಕೊರತೆಯೇ ಟೊಮೆಟೊ ಬೆಳೆಗೆ ವರವಾಗಿದ್ದು ಈ ಬಾರಿ ಅತ್ಯಧಿಕ ಫಸಲು ಬಂದಿದೆ. ಇದರಿಂದ ರೈತರಿಗೆ ಉಪಯೋಗವೇನೂ ಆಗಿಲ್ಲ. ಬೆಲೆ ಕುಸಿತದಿಂದ ರೈತರು ತೀವ್ರ ನಷ್ಟಕ್ಕೊಳಗಾಗಿದ್ದು ಅವರ ಗೋಳು ಕೇಳುವವರೇ ಇಲ್ಲದಾಗಿದೆ. ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ನಾಟಿ ಮಾಡಲಾಗುತ್ತಿದ್ದ ಟೊಮೆಟೊ ಬೆಳೆ ಪ್ರತಿ ಬಾರಿಯೂ ಮುಂಗಾರು ಮಳೆಯ ಹೊಡೆತಕ್ಕೆ ಸಿಲುಕುತ್ತಿತ್ತು, ರೋಗದಿಂದ ನರಳುತ್ತಿತ್ತು. ಅದರ ನಡುವೆಯೂ ಉಳಿದ ಬೆಳೆಗೆ ಉತ್ತಮ ಬೆಲೆ…

Read More
error: Content is protected !!