ಕರ್ನಾಟಕದ ಖಾಯಂ ರಹವಾಸಿ ಪತ್ರ ನೀಡುವಾಗ ಲೋಪವಾಗದಂತೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ : ಶಾಸಕ ಸಿ ಸಿ ಪಾಟೀಲ
ನರಗುಂದ : ಪಟ್ಟಣದಲ್ಲಿ ಇಂದು ಶಾಸಕ ಸಿ ಸಿ ಪಾಟೀಲ ತಮ್ಮ ಗೃಹ ಕಚೇರಿಯಲ್ಲಿ ನೆಡೆಸಿದ ಪತ್ರಿಕಾ ಘೋಷ್ಠಿಯಲ್ಲಿ ಎಸ್ ಐ ಆರ್ ಜಾಗೃತಿ ಹಾಗೂ ಸಿಎಂ ಡಿ ಕೆ ಶಿವಕುಮಾರ ಹೊರಡಿಸಿದ ಕರ್ನಾಟಕದ ಖಾಯಂ ರಹವಾಸಿ ನೀಡುವ ಕುರಿತು ಹೊರಡಿಸಿದ ಆದೇಶದ ಬಗ್ಗೆ ಅಧಿಕಾರಿಗಳಿಗೆ ಜಾಗೃತರಾಗಿ ಕೆಲಸ ಮಾಡಲು ಸೂಚಿಸಿದರು
ಹೌದು ಎಸ್ ಐ ಆರ್ ಈಗಾಗಲೇ ಜಾರಿಯಲ್ಲಿ ಇದೆ ಇದು ಕರ್ನಾಟಕದ ಎಲ್ಲಾ ಪ್ರಜೆಗಳಿಗೂ ಬಹಳ ಮಹತ್ವದಾಗಿದೆ ಇದರಿಂದ ಬೇರೆ ಬೇರೆ ಕಡೆ ವೋಟರ್ ಐಡಿ ಹೊಂದಿರುವ ವ್ಯಕ್ತಿಗಳ ವೋಟರ್ ಲಿಸ್ಟ್ ಅಲ್ಲಿರುವ ಹೆಸರು ರದ್ದು ಪಡಿಸಿ ಕೇವಲ ಒಂದು ಕಡೆ ಅವಕಾಶ ದೊರೆಯುತ್ತದೆ ಅಷ್ಟೇ ಅಲ್ಲ ಇದರಿಂದ ಕಳ್ಳ ಮತದಾನ ಕೊಡ ತಪ್ಪುತ್ತದೆ ಎಸ್ ಐ ಆರ್ ನಲ್ಲಿ ತಮ್ಮ ಸರಿಯಾದ ಮಾಹಿತಿ ತುಂಬಿ ಬಿ ಎಲ್ ಓ ಗಳ ಕಡೆ ನಿಮ್ಮ ಅರ್ಜಿ ಸಲ್ಲಿಸಿ ಅವರ ಕೊಟ್ಟ ಅರ್ಜಿ ತುಂಬದೆ ನಿಮ್ಮ ಬಳಿ ಇಟ್ಟುಕೊಂಡರೆ ನಿಮ್ಮ ಹೆಸರು ವೋಟರ್ ಲಿಸ್ಟ್ ಇಂದ ಡಿಲೀಟ್ ಆಗುತ್ತೆ ಇದರಿಂದ ನಿಮಗೆ ಸರಕಾರದಿಂದ ದೊರೆಯುವ ಸವಲತ್ತುಗಳು ತಪ್ಪುತ್ತವೆ ಎಂದು ತಿಳಿಸಿದರು ಇನ್ನೂ ಮಾತು ಮುಂದುವರಿಸಿದ ಶಾಸಕ ಸಿ ಸಿ ಪಾಟೀಲ ರಾಜ್ಯದ ಮುಖ್ಯ ಮಂತ್ರಿಯಾದ ಡಿ ಕೆ ಶಿವಕುಮಾರ ರಾಜ್ಯದಲ್ಲಿ 10 ವರ್ಷಕ್ಕಿಂತ ಹೆಚ್ಚು ದಿವಸ ವಾಸವಿದ್ದ ಜನರಿಗೆ ಖಾಯಂ ರಹವಾಸಿ ನೀಡುವದಾಗಿ ತಿಳಿಸಿದ್ದಾರೆ ಇದನ್ನು ನಾವೂ ಸ್ವಾಗತಿಸುತ್ತೇವೆ ಆದರೆ ಅದಕ್ಕೆ ನಮ್ಮ ರಾಜ್ಯದಲ್ಲಿ ವಾಸಿಸಿದ ವ್ಯಕ್ತಿಗಳಲ್ಲಿ ಸರಿಯಾದ ದಾಖಲೆಗಳಿದ್ದರೆ ಮಾತ್ರ ಖಾಯಂ ರಹವಾಸಿ ನೀಡಬೇಕು ಈ ಅಧಿಕಾರವನ್ನು ತಹಸೀಲ್ದಾರ ಮತ್ತು ಉಪ ತಹಸೀಲ್ದಾರಗೆ ನೀಡಿದ್ದಾರೆ ಇದರಲ್ಲಿ ಏನಾದರು ವ್ಯತ್ಯಾಸವಾದರೆ ಅದಕ್ಕೆ ಅಲ್ಲಿನ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು, ಡಿಕೆ ಶಿವಕುಮಾರ ಸರಕಾರ ಬಂದು ಒಂದು ತಿಂಗಳು ಕಳೆದರು ರಾಜ್ಯದಲ್ಲಿ ಕೃಷಿ ಸಚಿವರಿಲ್ಲ ಇವರ ಸಂಪುಟ ರಚನೆಯಾಗಿ ಒಂದು ತಿಂಗಳಲ್ಲೇ ಮೂರ್ನಾಲ್ಕು ಸಚಿವರು ತಮ್ಮ ಖಾತೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಹೀಗೆ ಆದರೆ ಇವರು ರೈತರ ಕಷ್ಟ ಅರಿಯುವದು ಯಾವಾಗ ರಾಜ್ಯದಲ್ಲಿ ಮಳೆ ಇಲ್ಲದೆ ಮುಂಗಾರು ಬೆಳೆ ಕೈಕೋಟ್ಟಿದೆ ಇದರ ಬಗ್ಗೆ ಸರಕಾರ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವದು ವಿಪರ್ಯಾಸ ಇನ್ನೂ ಗ್ಯಾರಂಟಿ ಯೋಜನೆಯಲ್ಲಿ ಅಕ್ರಮ ತಾಂಡವವಾಡುತ್ತಿದೆ ಎಂದು ಹೇಳುವ ಸರಕಾರ ಅದಕ್ಕಾಗಿ ಗ್ಯಾರಂಟಿ ಯೋಜನೆ ಸಮಿತಿ ಮಾಡಿ ತಾಲೂಕ ಅಧ್ಯಕ್ಷರಿಗೆ ತಿಂಗಳಿಗೆ 25 ಸಾವಿರ, ಜಿಲ್ಲಾಧ್ಯಕ್ಷರಿಗೆ ತಿಂಗಳಿಗೆ 50 ಸಾವಿರ ಕೊಡುವದಾದರೂ ಏಕೆ ಹಾಗಾದರೆ ಈ ಅಕ್ರಮದಲ್ಲಿ ಅವರು ಹೊಣೆಗಾರರನ್ನಾಗಿ ಮಾಡಿ ಅವರಿಗೆ ನೀಡಿದ 3 ವರ್ಷದ ಹಣವನ್ನು ಮರಳಿ ಸರಕಾರ ಪಡೆಯಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಸಂಗನಗೌಡ ಹಾಲಗೌಡ್ರ, ವಾಸಣ್ಣ ಜೋಗನ್ನವರ, ಅಜ್ಜಪ್ಪ ಹುಡೇದ, ಎಸ್ ಆರ್ ಪಾಟೀಲ, ಎಂ ಐ ಮೇಟಿ, ಅನೀಲ ಧರಿಯನ್ನವರ, ನಾಗರಾಜ್ ನೆಗಳೂರ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ ಚಂದ್ರಶೇಖರಗೌಡ ಪಾಟೀಲ ನರಗುಂದ
