ರೀಲ್ಸ್ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದ ಪತ್ನಿ; ಪತಿಗೆ ಊಟ ಕೊಡದೇ ಕಾಟ: ಹೆಂಡತಿಯನ್ನೇ ಕೊಲೆಗೈದ ಗಂಡ ಅರೆಸ್ಟ್
ಬೆಂಗಳೂರು: ಬೆಂಗಳೂರಿನಲ್ಲಿ ಬಿಹಾರ ಮೂಲದ ರೀಮಾಕುಮಾರಿ ಎಂಬ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕುಂಬಳಗೋಡು ಬಳಿಯ ಗೇರುಪಾಳ್ಯದಲ್ಲಿ ಕಳೆದ ತಿಂಗಳು ಜುಲೈ 25ರಂದು ರೀಮಾಕುಮಾರಿ ಎಂಬ ಮಹಿಳೆಯ ಕೊಲೆಯಾಗಿತ್ತು. ಇದೀಗ ಭೀಕರ ಕೊಲೆ ಪ್ರಕರಣದ ಅಸಲಿ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಆರೋಪಿ, ಆಕೆಯ ಪತಿ ಧೀರಜ್ ಕುಮಾರ್ (24) ಎಂಬಾತನನ್ನು ಬಿಹಾರದಲ್ಲಿ ಬಂಧಿಸಿ ಕರೆತಂದ ಕುಂಬಳಗೋಡು ಠಾಣೆ ಪೊಲೀಸರು ಕೊಲೆಗೆ ಕಾರಣ ಬಹಿರಂಗಪಡಿಸಿದ್ದಾರೆ. ಬಿಹಾರ ಮೂಲದ ಧೀರಜ್ ಮತ್ತು…
