ರಸ್ತೆ ಅಭಿವೃದ್ಧಿಗೆ ಮುಂದಾದ ಮುಖ್ಯಾಧಿಕಾರಿ ಪರಶುರಾಮ್ ಗುಡದಾರಿ
ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಕಲಾಂ ನಗರ
ಮತ್ತು 1ನೆ ವಾರ್ಡನ ವ್ಯಾಪ್ತಿಗೆ ಬರುವ ಕೌಡೇಶ್ವರ ನಗರದಲ್ಲಿ
ಮಳೆಯಿಂದ ರಸ್ತೆಗಳು ಕೆಸರು ಗದ್ದೆಯಾಗಿದ್ದವು
ಇದರಿಂದ ವಾರ್ಡಿಗೆ ಭೇಟಿ ನೀಡಿದ ಪುರಸಭೆ ಮುಖ್ಯ ಅಧಿಕಾರಿಗರಿ ಪರಶುರಾಮ್ ಗುಡದಾರಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಮುದಗಲ್ ಅವರು ತಾತ್ಕಾಲಿಕವಾಗಿ ರಸ್ತೆಗೆ ಬುರ್ಡರ್ಸ್ ಕಲ್ಲು ಕೆಂಪು ಮಣ್ಣು ಮೊಹರಂ ಹಾಕಿ ತಾತ್ಕಾಲಿಕ ರಸ್ತೆ ಅಭಿವೃದ್ಧಿಪಡಿಸುತ್ತೇವೆ ಹೇಳಿಕೆ ನೀಡಿದರು
ಅದರಂತೆ ಇಂದು ಪಟ್ಟಣದ ಕಲಾಂ ನಗರದಲ್ಲಿ ಮತ್ತು ಕೌಡೇಶ್ವರ ನಗರದಲ್ಲಿ
ಕೆಂಪು ಬೋರ್ಡ್ಸ್ ಕಲ್ಲು ಕೆಂಪು ಮೊಹರಂ ಮಣ್ಣು ಹಾಕಿ
ತಾತ್ಕಾಲಿಕ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದಾರೆ
ಇದರಿಂದ ಪುರಸಭೆ ಮುಖ್ಯ ಅಧಿಕಾರಿಗೆ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಮುದುಗಲ್ ಅವರ ಕಾರ್ಯಕ್ಕೆ ವಾರ್ಡಿನ ನಿವಾಸಿಗಳು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ
ವರದಿ ವೀರಣ್ಣ ಹಡಪದ nkstv4 ಲಕ್ಷ್ಮೇಶ್ವರ
