
ಗಾಮೇಸ್ ಕಂಪನಿಗೆ ಸೇರಿದ ವಿಂಡ್ ಫ್ಯಾನ್ ಇದಾಗಿದ್ದು, ಕಳೆದ 10 ವರ್ಷಗಳ ಹಿಂದೆ ಅಳವಡಿಸಿದ್ದ ವಿಂಡ್ ಫ್ಯಾನ್ ಎನ್ನಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ವೇಗವಾಗಿ ಗಾಳಿ ಬಿಸುತ್ತಿರುವುದರಿಂದ ಫ್ಯಾನ್ ನಿಯಂತ್ರಣಕ್ಕೆ ಸಿಗಲಿಲ್ಲ.
ಪವರ್ ಸಪ್ಲಾಯ್ ಬಂದ್ ಮಾಡಿದ್ರೂ ಫ್ಯಾನ್ ತಿರುಗುತ್ತಿತ್ತು. ಮೋಟರ್ ಬಿಸಿಯಾಗಿ ನಂತರ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎಂದು ಟೆಕ್ನಿಶಿಯನ್ ಸ್ಪಷ್ಟನೆ ನೀಡಿದ್ದಾರೆ.
ಫ್ಯಾನ್ ನಲ್ಲಿ ಬೆಂಕಿ ಕಂಡು ಸ್ಥಳಿಯ ರೈತರಲ್ಲಿ ಆತಂಕ ಮೂಡಿದೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಅಕ್ಕ ಪಕ್ಕದ ರೈತರು ಸ್ಥಳದಿಂದ ದೂರು ಓಡಿಹೋಗಿದ್ದಾರೆ.
ನಂತರ ಅಗ್ನಿ ಶಾಮಕದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಈ ಬಗ್ಗೆ ವಿಂಡ್ ಫ್ಯಾನ್ ಕಂಪನಿ ಸಿಬ್ಬಂದಿಗಳು, ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
nks tv4 ನ್ಯೂಸ್ ಗದಗ
