
ನಂಜನಗೂಡು
ಅಮಾವಾಸ್ಯೆ ಯಂದು ಸ್ಮಶಾನದಿಂದ ರಾತ್ರೋ ರಾತ್ರಿ ಮನುಷ್ಯನ ತಲೆ ಬುರುಡೆ ಕೈ ತಂದು ವಾಮಾಚಾರ ಮಾಡಿ ಬೆಚ್ಚಿ ಬೀಡಿಸಿರುವ ಘಟನೆ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ
ರಾತ್ರೋ ರಾತ್ರಿ ಅಮಾವಾಸ್ಯೆಯ ಕತ್ತಲಿನಲ್ಲಿ ರಂಗೋಲಿ ಬಿಡಿಸಿ ನಿಂಬೆ ಹಣ್ಣು ಕುಂಕುಮ ಹಾಕಿ ತಲೆ ಬುರುಡೆ ಹಾಗೂ ಕೈ ಇತ್ಟ್ಟು ಯಾರು ವಾಮಾಚಾರ ಮಾಡಿದ್ದಾರೋ ಎಂಬುದು ಯಾರಿಗೂ ಗೊತ್ತಿಲ್ಲ ಬೆಳ್ಳಂಬೆಳಿಗ್ಗೆ ಇದನ್ನು ನೋಡುತ್ತಿದ್ದ ಹಾಗೆ ಇಡೀ ಗ್ರಾಮಡ ಜನರು ಮಕ್ಕಳು ಹೆದರಿ ಕಂಗಾಲಾಗಿ ತಾಲೂಕು ಆಡಳಿತಡ ಸಹಾಯ ಕೇಳಿದ್ದಾರೆ.
ಯಾರಿಗೂ ಗೊತ್ತಾಗದ ಹಾಗೆ ಇಂತಹ ವಾಮಾಚಾರವನ್ನು ಮಾಡಿರತಕ್ಕಂತ ಕಿಡಿಗೇಡಿ ಮಂತ್ರವಾದಿಗಳನ್ನು ಹಾಗೂ ಇದಕ್ಕೆ ಸಹಾಯ ಮಾಡಿರುವ ವರನ್ನು ಕೂಡಲೇ ಬಂಧಿಸಬೇಕು 40 ವರ್ಷಗಳಿಂದ ಇಂತಹ ಘಟನೆ ನಮ್ಮ ಊರಲ್ಲಿ ನಡೆದಿಲ್ಲ ಎನ್ನುತ್ತಾರೆ ಗ್ರಾಮಸ್ಥರು ದಕ್ಷಿಣ ಕಾಶಿ ನಂಜುಂಡೇಶ್ವರನ ಸನ್ನಿಧಿ ಪಕ್ಕದಲ್ಲಿದ್ದರೂ ವಾಮಾಚಾರಡ ಕುತಂತ್ರ ಮಾತ್ರ ನಂಜನಗೂಡಿನಲ್ಲಿ ಅಲ್ಲಲ್ಲಿ ನಡೆಯುತ್ತಲೇ ಇದೆ ಇದಕ್ಕೆಲ್ಲ ತಾಲೂಕು ಆಡಳಿತ ಕಡಿವಾಣ ಹಾಕುವರೇ ಕಾದು ನೋಡಬೇಕಿದೆ…??
