ಸಿ.ಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಡಾ.ಚಂದ್ರು ಲಮಾಣಿ
ಲಕ್ಷ್ಮೇಶ್ವರ “ತಾಲೂಕಿನ ಕುಂದ್ರಳ್ಳಿ ಗ್ರಾಮದಿಂದ ಬಟ್ಟೂರು ಲಕ್ಷ್ಮೇಶ್ವರ ಸಂಪರ್ಕಿಸುವ ಮೇನ್ ರಸ್ತೆ ಸಿ.ಸಿ ರಸ್ತೆ ನಿರ್ಮಾಣಕ್ಕೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಶಾಸಕ ಡಾ ಚಂದ್ರು ಲಮಾಣಿ ಅವರು ಹಾಗೂ ಬಟ್ಟೂರು ಗ್ರಾಮ ಪಂಚಾಯತಿಯ ಅಧ್ಯಕ್ಷನಿಯಾದ ನೀಲವ್ವ ಮಂಜಪ್ಪ ಕಳಸದ ಅವರು ಕುಂದ್ರಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಭೂಮಿ ಪೂಜೆ ನೆರವೇರಿಸಿದರು
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಡಾ ಚಂದ್ರು ಲಮಾಣಿ ಅವರು
ಬಹು ದಿನಗಳಿಂದ ಹಾಗೆ ಉಳಿದಿದ್ದ ಈ ರಸ್ತೆಯನ್ನು ಇಂದು ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಲಾಗಿದೆ ಗುತ್ತಿಗೆದಾರರು ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಎಂದರು
ಬಟ್ಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷನಿಯಾದ ನೀಲವ್ವ ಮಂಜಪ್ಪ ಕಳಸದ ಅವರು ಮಾತನಾಡಿ ಬಹುದಿನಗಳಿಂದ ಈ ರಸ್ತೆ ಹಾಗೆ ಉಳಿದಿತ್ತು ಇದರಿಂದ ಗ್ರಾಮಸ್ಥರು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದರು
ಇದನ್ನು ಮನಗಂಡ ಶಾಸಕರು ಅನುದಾನ ತರುವ ಮೂಲಕ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ ಎಲ್ಲ ಗ್ರಾಮಸ್ಥರು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದರು
ಈ ಸಮಯದಲ್ಲಿ ಗ್ರಾಮದಲ್ಲಿ ಕುಂದ್ರಳ್ಳಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಮಲ್ಲವ್ವ ತಳವಾರ ಸದಸ್ಯರಾದ ರುದ್ರಯ್ಯ ಶೀಲವಂತಮಠ ಮಂಜುನಾಥ ಗೌರಿ ಜಗದೀಶಗೌಡ್ರು ಪಾಟೀಲ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಲಮಾಣಿ
ಕಲ್ಲಪ್ಪ ಹಡಪದ ಪರಮೇಶಪ್ಪ ಹತ್ತಾಳ ಸಂತೋಷ ಲಮಾಣಿ ಜಾನು ಲಮಾಣಿ ಗಂಗಾಧರ ಮೆಣಸಿನಕಾಯಿ
ಗಿರೀಶ್ ಚೌರೆಡ್ಡಿ ಬಸವರಾಜ ಚಕ್ರಸಾಲಿ
ಸೇರಿದಂತೆ ಗ್ರಾಮದ ಗುರು ಹಿರಿಯರು ಮುಖಂಡರು ಇದ್ದರು
ವರದಿ ವೀರಣ್ಣ ಹಡಪದ nkstv4 ಲಕ್ಷ್ಮೇಶ್ವರ
