ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಜೀವಾವಧಿ ಶಿಕ್ಷೆಗೆ ಹೈಕೋರ್ಟ್ ತಡೆ ನೀಡಿದ್ದು, ಜಾಮೀನು ಮಂಜೂರು ಮಾಡಿ ಧಾರವಾಡಕ್ಕೆ ಪ್ರವೇಶಕ್ಕೆ ಅವಕಾಶ ನೀಡಿದೆ. ಈ ವಿಚಾರಕ್ಕೆ ಯೋಗೇಶಗೌಡ ಸಹೋದರ ಗುರುನಾಥ ಗೌಡ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿ, ನಾವು ಸುಪ್ರೀಂ ಕೋರ್ಟ ಮೆಟ್ಟಿಲು ಹತ್ತುವುದಾಗಿ ಹೇಳಿದ್ದಾರೆ.

ಧಾರವಾಡದಲ್ಲಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮಗೆ ವಕೀಲರು ಜಾಮೀನು ಸಿಕ್ಕಿದೆ ಅಂದ್ರು, ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿದೆ. ನಮಗೂ ಕಾನೂನು ಇದೆ, ಅವರಿಗೂ ಕಾನೂನು ಇದೆ, ನಮಗೆ ನ್ಯಾಯ ಸಿಗುತ್ತೆ ಅಂತ ನಾವು ಕೋರ್ಟ್ ಮೊರೆ ಹೋಗಿದ್ವಿ. ಹಿಂದಿನ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿತ್ತು. ಅವರು ಸಹ ಹೈಕೋರ್ಟ್ ಮೊರೆ ಹೋಗಿದ್ರು, ನಾವು ಸುಪ್ರೀಂ ಕೋರ್ಟ್ ಗೆ ಹೋಗ್ತಿವೆ. ಬಸವರಾಜ್ ಕೊರವರ ಜೊತೆ ಚರ್ಚಿಸಿ ಸುಪ್ರೀಂ ಮೊರೆ ಹೋಗ್ತಿವಿ. ಯಾವ ಕಾರಣಕ್ಕೆ ಜಾಮೀನು ಕೊಟ್ಟಾರ ಗೊತ್ತಿಲ್ಲ, ಅದನ್ನ ತಿಳಕೊಂಡು ನಾವು ಸುಪ್ರೀಂ ಕೋರ್ಟ್ನಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ. ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆಂದ ಗುರುನಾಥ್ ಗೌಡರ ಹೇಳಿದ್ದಾರೆ
