Top News

ಬೆಂಗಳೂರಲ್ಲಿ ಮಶ್ರೂಮ್ ಬಿರಿಯಾನಿಗೆ ಚಟ್ನಿ ಕೊಟ್ಟಿಲ್ಲವೆಂದು, ಮಾಲೀಕನ ಮೇಲೆ ಹಲ್ಲೆ ನಡೆಸಿ, ಹೋಟೆಲ್ ದ್ವಂಸಗೊಳಿಸಿದ ಕಿಡಿಗೇಡಿಗಳು!

ಬೆಂಗಳೂರು : ಬೆಂಗಳೂರಲ್ಲಿ ಮಶ್ರೂಮ್ ಬಿರಿಯಾನಿ ಜೊತೆಗೆ ಚಟ್ನಿ ಕೊಟ್ಟಿಲ್ಲವೆಂದು ಕಿಡಿಗೇಡಿಗಳು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿ ದರ್ಪ ಮೆರೆದಿದ್ದು ಕ್ಯಾಶ್ ಕೌಂಟರ್ ಹಾಗು ಟೆಂಟ್ ಧ್ವಂಸಗೊಳಿಸಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.

ಬೆಂಗಳೂರಿನ ನಾಗರ ಭಾವಿಯ ಸುವರ್ಣ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.

ಅಪ್ಪು ಮಶ್ರೂಮ್ ಬಿರಿಯಾನಿ ಹೋಟೆಲ್ಗೆ ಕಿಟಗೇಡಿಗಳ ಗುಂಪು ಬಂದಿತ್ತು. ಈ ವೇಳೆ ಕಿಡಿಗೇಡಿಗಳು ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಬಳಿಕ ಬಿರಿಯಾನಿ ಜೊತೆಗೆ ಚಟ್ನಿ ಹಾಕಿ ಕೊಟ್ಟಿಲ್ಲವೆಂದು ಕಿರಿಕ್ ಮಾಡಿದ್ದಾರೆ. ಟೆಂಟ್ ಮತ್ತು ಕ್ಯಾಶ್ ಕೌಂಟರ್ ಧ್ವಂಗೊಳಿಸಿ ಕಿಡಿಗೇಡಿಗಳು ಗಲಾಟೆ ಮಾಡಿದ್ದಾರೆ.

ಇದೇ ವೇಳೆ ಹೋಟೆಲ್ ನಲ್ಲಿದ್ದ ಸಿಬ್ಬಂದಿಗಳ ಮೇಲು ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಸಹ ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಯುವಕ ರಂಜಿತ್ ನನ್ನು ಕಿಡಿಗೇಡಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!