ಕುಷ್ಟಗಿ ತಾಲೂಕಿನ ಬಿಜಕಲ್ ಪಂಚಾಯಿತಿ ಕೆ ಹೊಸೂರು ಗ್ರಾಮದಲ್ಲಿ ಕುಡಿಯುವ ನೀರಿನ ಕೈ ಬೋರು ಕೆಟ್ಟ ನಿಂತು ತಿಂಗಳ ಕಳೆದರೂ ರಿಪೇರಿ ಮಾಡಿಸದ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ
ಸುಮಾರು ಕೆ ಹೊಸೂರು ಗ್ರಾಮದಲ್ಲಿ 900 ಕ್ಕೂ ಹೆಚ್ಚು ಜನರು ವಾಸವಿದ್ದು ಕೆಟ್ಟ ನಿಂತು ಕೈ ಬೋರಿನ ಕೊಳವೆ ತುಕ್ಕು ಹಿಡಿದು ಅದರಲ್ಲಿ ವಿಷಕಾರಿ ಹಾವು ಚೇಳುಗಳು ವಾಸಮಾಡುಂತಾಗಿದೆ ಮತ್ತು ತುಕ್ಕು ಹಿಡಿದ ಬೋರಿನ ನೀರಿನಿಂದ ಸಾರ್ವಜನಿಕರಿಗೆ ಹಲವು ರೋಗಗಳು ಬರುವದು ನಿಶ್ಚಿತ
ಮತ್ತು ಗ್ರಾಮದಲ್ಲಿ ಜೆಜೆಎಮ್ ನೀರು ಬರುವದು ಅಪರೂಪ ಸಾರ್ವಜನಿಕರೆಲ್ಲರೂ ಕೈ ಬೋರಿನ ನೀರೆ ಅವರ ಜೀವನ ಆಗಿದ್ದು
ಹಾಗಾಗಿ ಪ್ರಮುಖವಾಗಿ ಸಾರ್ವಜನಿಕರ ಮೂಲಭೂತ ಸೌಕರ್ಯ ನೀರಿನ ಕೈ ಬೋರು ರಿಪೇರಿ ಮಾಡಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ
ಹಾಗಾಗಿ ಕೆ ಹೊಸುರು ಗ್ರಾಮದಲ್ಲಿ ದುರಸ್ಥಿಯಾಗಿರುವ ಕೈ ಬೋರನ್ನು ಕೂಡಲೆ ರಿಪೇರಿ ಮಾಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ
