Top News

ಗದಗ ಜಿಲ್ಲೆ ರೋಣ ತಾಲ್ಲೂಕು ಮಲ್ಲಾಪುರ ಗ್ರಾಮದ ಕೃಷಿಹೊಂಡದಲ್ಲಿ ಅನಾಮದೆಮಹಿಳೆಯ ಶವ ಪತ್ತೆ

03.08.2026 ರಂದು ಮುಂಜಾನೆ 09-30 ಗಂಟೆಯಿಂದ ಈ ದಿವಸ ದಿನಾಂಕ: 04.08.2026 ರಂದು ಮುಂಜಾನೆ 08-20 ಗಂಟೆಯ ನಡುವೆ ವೇಳೆಯಲ್ಲಿ ಯಾರೋ ಆರೋಪಿತರು ಅನಾಮಧೇಯ ಸುಮಾರು 25 ರಿಂದ 28 ವರ್ಷದ ಮಹಿಳೆಗೆ ಯಾವದೋ ಒಂದು ಉದ್ದೇಶದಿಂದ

ಮಲ್ಲಾಪೂರ ಗ್ರಾಮದ ಅಂದಪ್ಪ ಭೀಮಪ್ಪ ಕೌಜಗೇರಿ ರವರ ಹೊಲದಲ್ಲಿ ಕಲ್ಲಿನಿಂದ ತಲೆಗೆ ಜಜ್ಜಿ ಮತ್ತು ಕೊರಳಲ್ಲಿಯ ದಾರ ಮತ್ತು ತಾಳಿ ಸರ ಹಿಡಿದು ಜಗ್ಗಿ ಕೊಲೆ ಮಾಡಿ. ಕೊಲೆ ಮಾಡಿದ ವಿಷಯವು ಯಾರಿಗೂ ಗೊತ್ತಾಗದಂತೆ ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಶವವನ್ನು ಅಂದಪ್ಪ ಕೌಜಗೇರಿ ರವರ ಹೊಲದಲ್ಲಿಯ ಕೃಷಿ ಹೊಂಡದಲ್ಲಿ ವಗೆದಿದ್ದು ಇರುತ್ತದೆ ಆರೋಪಿತರಿಗೆ ಪತ್ತೆ ಮಾಡಬೇಕು ಅಂತಾ ವಗೈರೆ ನಮೂದ ಇದ್ದ ಸ್ವೀಕರಿಸಿಕೊಂಡು ರೋಣ ಪೊಲೀಸ್ ಠಾಣೆ ಗುನ್ನಾ ನಂಬರ: 150/2026 ಕಲಂ: 103[1].238 ಬಿಎನ್.ಎಸ್-2023 ನೇದ್ದರ ಕೆಳಗೆ ಪ್ರಕರಣ ದಾಖಲಾಗಿ ತನಿಖೆ ಪೊಲೀಸರು ನೆಡೆಸುತ್ತಿದ್ದಾರೆ

ಅಂದಾಜು ಶವವಾದ
25 ರಿಂದ 28 ವರ್ಷ ಅನಾಮಧೇಯ ಮಹಿಳೆ.

ಎತ್ತರ; 5 ಪೂಟ್.
ಮೈಬಣ್ಣ ; ಸಾಧಗಪ್ಪು ಮೈ ಬಣ್ಣ. ದುಂಡು ಮುಖ,

ಮೈಮೇಲಿನ ಬಟ್ಟೆಗಳ ವಿವರ.; ಕಪ್ಪು ಬಣ್ಣದ ಜಂಪರ, ಕೆಂಪು ಬಣ್ಣದ ಲಂಗಾ.

ಮೈಮೇಲಿನ ಆಭರಣಗಳ ವಿವರ;- ಕೊರಳಲ್ಲಿ ಬಂಗಾರದ ನಮೂನೆಯ ತಾಳಿ. ಕೊರಳಲ್ಲಿ ಕಪ್ಪು ಬಣ್ಣದ ದಾರ ಅದರಲ್ಲಿ ಕಲಾವತಿ ಮಾತೆಯ ಪೋಟೊ ಇರುವ ಲಾಕೇಟ್. ಬಲಗೈ ಮತ್ತು ಎಡಗೈಯಲ್ಲಿ ಹಸಿರು ಬಳೆಗಳು. ಎರಡು ಬಂಗಾರದ ನಮೂನೆಯ ಬಳೆಗಳು. ಎರಡು ಕಾಲುಗಳಲ್ಲಿ ಬೆಳ್ಳಿಯ ಕಾಲ್ ಜೈನ್, ಎರಡು ಕಾಲುಗಳಲ್ಲಿ ಬೆಳ್ಳಿಯ ಕಾಲುಂಗರ ಎರಡು ಕಿವಿಗಳಲ್ಲಿ ಬಂಗಾರದ ನಮೂನೆಯ ಕಿವಿ ಓಲೆ.

ಈ ಮೇಲ್ಕಂಡ ಚಹರೆಯುಳ್ಳ ಮಹಿಳೆ ಬಗ್ಗೆ ತಮ್ಮ ಠಾಣಾ ಹದ್ದಿಯಲ್ಲಿ ಯಾವುದಾದರೂ ಮಾಹಿತಿ ಸಿಕ್ಕಲ್ಲಿ

ಈ ಕೆಳಕಂಡ ವಿಳಾಸಕ್ಕೆ ಮಾಹಿತಿಯನ್ನು ತಿಳಿಸಲು
ಪೊಲೀಸ್ ಇಲಾಖೆ ತಿಳಿಸಿದೆ

ಪ್ರಕಾಶ ಬಣಕಾರ ಪಿ.ಎಸ್.ಐ [ಕಾ&ಸು]ರೋಣ ಪೊಲೀಸ್ ಠಾಣೆ.
-9480804457

ಗದಗ ಕಂಟ್ರೋಲ ರೂಮ ದೂರವಾಣಿ ಸಂಖ್ಯೆ: 9480804400

ವಿಜಯಕುಮಾರ ಸಿಪಿಐ ರೋಣ ವೃತ್ತ
9480804434

ವರದಿ ರುದ್ರಪ್ಪ ಹೆಬ್ಬಳ್ಳಿ ರೋಣ

Leave a Reply

Your email address will not be published. Required fields are marked *

error: Content is protected !!