Top News

ಒಂದೆಡೆ ಬರ, ಮತ್ತೊಂದೆಡೆ ಸಂಪುಟ ಗೊಂದಲ – ಡಿಸಿಎಂ ಪರಂ ದೂರವುಳಿದಿದ್ದೇಕೆ?

ಬೆಂಗಳೂರು : ಕರ್ನಾಟಕ (Karnataka) ರಾಜ್ಯದಲ್ಲಿ ಒಂದಡೆ ಬರದ (Draught) ಸಂಕಷ್ಟ ಮತ್ತು ಇನ್ನೊಂದೆಡೆ ಸಂಪುಟ ವಿಸ್ತರಣೆಯ (Cabinet Expansion) ಗೊಂದಲ ಮನೆಮಾಡಿವೆ. ಆದರೆ ಈ ಸಮಯದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ (G Parameshwar) ಈ ಎಲ್ಲ ತಾಕಲಾಟಗಳಿಂದ ದೂರವುಳಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇಂದು ಜಿ. ಪರಮೇಶ್ವರ್‌ ಜನ್ಮದಿನವೂ ಹೌದು. ಆದರೆ ಬರದ ಹಿನ್ನೆಲೆಯಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಜಿ. ಪರಮೇಶ್ವರ್‌ ನಿರ್ಧರಿಸಿದ್ದರು.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಹಾಗೂ ಸಾರ್ವಜನಿಕರು ಯಾವುದೇ ರೀತಿಯ ಸಂಭ್ರಮಾಚರಣೆ, ಸನ್ಮಾನ ಕಾರ್ಯಕ್ರಮ ಅಥವಾ ಸಭೆಗಳನ್ನು ಆಯೋಜಿಸಬಾರದು ಎಂದು ವಿನಮ್ರವಾಗಿ ಮನವಿ ಮಾಡುತ್ತೇನೆ. ನಾನು ಕಾರ್ಯನಿಮಿತ್ತ ದೂರದ ಪ್ರಯಾಣ ಮಾಡಬೇಕಾಗಿರುವುದರಿಂದ ಆ ದಿನ ವೈಯಕ್ತಿಕ ಭೇಟಿಗೆ ಲಭ್ಯವಿರುವುದಿಲ್ಲ. ನಿಮ್ಮ ಪ್ರೀತಿ, ಅಭಿಮಾನ ಮತ್ತು ಶುಭಾಶಯಗಳನ್ನು ನಾನು ಹೃದಯಪೂರ್ವಕವಾಗಿ ಗೌರವಿಸುತ್ತೇನೆ. ನನ್ನ ಜನ್ಮದಿನವನ್ನು ಅರ್ಥಪೂರ್ಣ ಜನಸೇವೆಯ ಮೂಲಕ ಹಾಗೂ ಬರದಿಂದ ಸಂಕಷ್ಟಕ್ಕೊಳಗಾದ ಜನರಿಗೆ ನೆರವು ನೀಡುವ ಮೂಲಕ ಆಚರಿಸುವಂತೆ ಕೋರುತ್ತೇನೆ. ನಿಮ್ಮ ಪ್ರೀತಿ ತುಂಬಿದ ಹಾರೈಕೆಗಳೇ ನನಗೆ ಸನ್ಮಾನ, ಉಡುಗೊರೆಗಳು. ಎಂದಿನಂತೆ ನಿಮ್ಮ ಅಕ್ಕರೆ ನನಗಾಗಿರಲಿ. ಧನ್ಯವಾದಗಳು ಎಂಬ ಸಂದೇಶ ಹಂಚಿಕೊಂಡಿದ್ದರು.

ಆದರೆ ಉಪಮುಖ್ಯಮಂತ್ರಿಯಂಥಾ ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿ. ಪರಮೇಶ್ವರ್‌ ಅವರು ಈಗ ರಾಜೀನಾಮೆ ಪರ್ವ, ಬಂದ್‌ ಮುಷ್ಕರಗಳು, ಅಸಮಾಧಾನದ ಉಬ್ಬರ ನಡೆಯುತ್ತಿರುವ ಹೊತ್ತಿನಲ್ಲೇ ದೂರಪ್ರಯಾಣದ ನೆಪವೊಡ್ಡಿ ದೂರವುಳಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಒಂದಡೆ ಸಿದ್ದರಾಮಯ್ಯ ಅವರ ಬಣಕ್ಕೆ ಸಂಪುಟ ವಿಸ್ತರಣೆಯಿಂದ ಅಸಮಾಧಾನವಾಗಿದೆ ಎಂದು ನೇರವಾಗಿಯೇ ಆಪಾದಿಸಲಾಗಿದ್ದರೆ , ಮತ್ತೊಂದಡೆ ಸಿಎಂ ಡಿ.ಕೆ. ಶಿವಕುಮಾರ್‌ ಮತ್ತಿತರ ಸಚಿವರು ಅಸಮಾಧಾನಿತ ಶಾಸಕರ ಓಲೈಕೆಯಲ್ಲಿ ತೊಡಗಿದ್ದಾರೆ. ಆದರೆ ಈ ವಲಯದಲ್ಲಿ ಜಿ.ಪರಮೇಶ್ವರ್‌ ಅವರ ಗೈರು ಹಾಜರಿ ಎದ್ದುಕಾಣುತ್ತಿದೆ.

ಡಿ.ಕೆ. ಶಿವಕುಮಾರ್‌ ಅವರು ಸಿಎಂ ಆದಾಗ ಪರಮೇಶ್ವರ್‌ ಅವರು, ಇನ್ನೂ ಎಷ್ಟು ದಿನ ನಾವು ತುಳಿತಕ್ಕೆ ಒಳಗಾಗಬೇಕು ಎಂದು ಅಳಲು ತೋಡಿಕೊಂಡಿದ್ದರು ಎಂಬುದು ಗಮನಾರ್ಹ.

BIG NEWS :‌ 2028ರ ಅಕ್ಟೋಬರ್‌ನಿಂದ ವಾಹನಗಳಿಗೆ ‘ವಿ2ವಿ’ ಸಂವಹನ ತಂತ್ರಜ್ಞಾನ ಕಡ್ಡಾಯ – ರಸ್ತೆ ಅಪಘಾತ ತಡೆಗೆ ಕೇಂದ್ರದ ಮಾಸ್ಟರ್ ಪ್ಲಾನ್!

ನವದೆಹಲಿ: ದೇಶದಲ್ಲಿ(india) ದಿನೇ ದಿನೇ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ(road accident) ಕಡಿವಾಣ ಹಾಕಲು ಹಾಗೂ ಪ್ರಯಾಣಿಕರ ಭದ್ರತೆ ಹೆಚ್ಚಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಮಹತ್ವದ ಹೆಜ್ಜೆ ಇಟ್ಟಿದೆ. 2028ರ ಅಕ್ಟೋಬರ್ 1ರಿಂದ ಉತ್ಪಾದನೆಯಾಗುವ ಎಲ್ಲಾ ಹೊಸ ವಾಹನಗಳಲ್ಲಿ ‘ವೆಹಿಕಲ್ ಟು ವೆಹಿಕಲ್’ (V2V) ಸಂವಹನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಈ ಕುರಿತು ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಎಲ್ಲಾ ಮಾದರಿಯ ವಾಹನಗಳಿಗೂ ಅನ್ವಯ

ಈ ನೂತನ ನಿಯಮವು ಎಲ್, ಎಂ ಮತ್ತು ಎನ್ ಕೆಟಗರಿಗೆ ಸೇರುವ ಎಲ್ವಿ (L), ಎಂ (M) ಹಾಗೂ ಎನ್ (N) ವರ್ಗದ ವಾಹನಗಳಿಗೆ ಅನ್ವಯಿಸಲಿದೆ. ಅಂದರೆ ದ್ವಿಚಕ್ರ, ತ್ರಿಚಕ್ರ ವಾಹನಗಳು, ಕಾರುಗಳು, ಎಸ್‌ಯುವಿ, ಬಸ್‌ಗಳು, ಸರಕು ಸಾಗಣೆ ಟ್ರಕ್‌ಗಳು ಸೇರಿದಂತೆ ಸಣ್ಣ ಹಾಗೂ ಬೃಹತ್ ಗಾತ್ರದ ಬಹುತೇಕ ಎಲ್ಲಾ ವಾಹನಗಳಿಗೂ ಈ ತಂತ್ರಜ್ಞಾನ ಕಡ್ಡಾಯವಾಗಲಿದೆ. ಈ ತಂತ್ರಜ್ಞಾನದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ವಾಹನ ತಯಾರಕರಿಗೆ ಹಾಗೂ ಪೂರೈಕೆದಾರರಿಗೆ ಸಾಕಷ್ಟು ಕಾಲಾವಕಾಶ ನೀಡುವ ಉದ್ದೇಶದಿಂದ ಹಂತ ಹಂತವಾಗಿ ಇದನ್ನು ಜಾರಿಗೆ ತರಲಾಗುತ್ತಿದೆ.

ಏನಿದು ‘ವಿ2ವಿ’ ಸಂವಹನ ತಂತ್ರಜ್ಞಾನ?

‘ವಿ2ವಿ’ ಅಥವಾ ವೆಹಿಕಲ್ ಟು ವೆಹಿಕಲ್ ವ್ಯವಸ್ಥೆಯು ರಸ್ತೆಯಲ್ಲಿ ಚಲಿಸುವ ವಾಹನಗಳು ಪರಸ್ಪರ ಸಂವಹನ ನಡೆಸಲು ನೆರವಾಗುವ ಒಂದು ವೈರ್‌ಲೆಸ್ ತಂತ್ರಜ್ಞಾನವಾಗಿದೆ. ಈ ವ್ಯವಸ್ಥೆಯು ವಾಹನದ ವೇಗ, ನಿಖರ ಸ್ಥಳ, ಸಂಚರಿಸುತ್ತಿರುವ ದಿಕ್ಕು, ವೇಗದಲ್ಲಾಗುವ ದಿಢೀರ್ ಬದಲಾವಣೆ ಹಾಗೂ ಲೇನ್ ಬದಲಾವಣೆಯಂತಹ ಪ್ರಮುಖ ಮಾಹಿತಿಗಳನ್ನು ಸುತ್ತಮುತ್ತಲ ವಾಹನಗಳಿಗೆ ರೇಡಿಯೋ ತರಂಗಗಳ ಮೂಲಕ ನಿರಂತರವಾಗಿ ರವಾನಿಸುತ್ತದೆ. ವಿಶೇಷವೆಂದರೆ, ಚಾಲಕನ ಕಣ್ಣಿಗೆ ನೇರವಾಗಿ ಕಾಣಿಸದ ಅಥವಾ ವಾಹನದ ಸಾಮಾನ್ಯ ಸೆನ್ಸರ್‌ಗಳ ವ್ಯಾಪ್ತಿಯನ್ನು ಮೀರಿದ ಅಪಾಯಗಳ ಕುರಿತಾಗಿಯೂ ಈ ತಂತ್ರಜ್ಞಾನ ಮುಂಚಿತವಾಗಿಯೇ ಎಚ್ಚರಿಕೆ ನೀಡುತ್ತದೆ.

ಅಪಘಾತ ತಡೆಯುವುದು ಹೇಗೆ?

ಮುಂದೆ ಸಾಗುತ್ತಿರುವ ವಾಹನ ದಿಢೀರನೆ ಬ್ರೇಕ್ ಹಾಕಿದಾಗ, ಅಪಾಯಕಾರಿ ರೀತಿಯಲ್ಲಿ ಲೇನ್ ಬದಲಾಯಿಸಿದಾಗ, ಒನ್-ವೇ ರಸ್ತೆಯಲ್ಲಿ ಎದುರಿನಿಂದ ವಾಹನ ಬಂದಾಗ ಅಥವಾ ಮಂಜು ಮುಸುಕಿದ ವಾತಾವರಣದಲ್ಲಿ ಅಪಘಾತದ ಸಾಧ್ಯತೆ ಎದುರಾದಾಗ ‘ವಿ2ವಿ’ ವ್ಯವಸ್ಥೆಯು ಹಿಂದಿನ ವಾಹನದ ಚಾಲಕನಿಗೆ ತಕ್ಷಣವೇ ಅಲರ್ಟ್ ನೀಡುತ್ತದೆ. ಇದರಿಂದ ಚಾಲಕನಿಗೆ ತಕ್ಷಣವೇ ಬ್ರೇಕ್ ಹಾಕಲು ಅಥವಾ ವಾಹನ ನಿಯಂತ್ರಿಸಲು ಸಾಕಷ್ಟು ಸಮಯ ಸಿಗಲಿದ್ದು, ಭೀಕರ ಡಿಕ್ಕಿಗಳನ್ನು ನಿಯಂತ್ರಿಸಬಹುದಾಗಿದೆ.

ಈಗಾಗಲೇ ಚೀನಾ, ಜಪಾನ್, ಅಮೆರಿಕ ಮತ್ತು ಅನೇಕ ಯುರೋಪಿಯನ್ ದೇಶಗಳಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಹಾಗೂ ಆಯ್ದ ವಾಹನಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಭಾರತದಲ್ಲೂ ಇದು ಜಾರಿಗೆ ಬಂದಲ್ಲಿ ರಸ್ತೆ ಸುರಕ್ಷತಾ ಕ್ಷೇತ್ರದಲ್ಲಿ ಬೃಹತ್ ಕ್ರಾಂತಿ ಉಂಟಾಗಲಿದೆ.

Leave a Reply

Your email address will not be published. Required fields are marked *

error: Content is protected !!