Top News

ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರಿಗೆ ಗಜೇಂದ್ರಗಡದಲ್ಲಿ ಭವ್ಯ ಸ್ವಾಗತಕ್ಕೆ ಸಕಲ ಸಿದ್ಧತೆ

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಾಗಮಾರ ಸೇವಾ ಸಮಿತಿ (ರಿ) ಹಾಗೂ ಭಗವಾನ್ ಮಹಾವೀರ ಜೈನ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಪಿ.ಜಿ. ಸೆಂಟರ್ ವತಿಯಿಂದ ಆಯೋಜಿಸಿರುವ ಘಟಿಕೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಮಾನ್ಯ ಶ್ರೀ ಥಾವರಚಂದಜಿ ಗೆಹ್ಲೋಟ್ ಅವರು ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗುರುವಾರ, ಜುಲೈ 23, 2026 ರಂದು ಬೆಳಿಗ್ಗೆ 11.00 ಗಂಟೆಗೆ ಗಜೇಂದ್ರಗಡದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಿ ಘಟಿಕೋತ್ಸವವನ್ನು ಉದ್ಘಾಟಿಸಲಿದ್ದಾರೆ….

Read More

ಕೆಡಿಪಿ ಸಭೆಯಲ್ಲಿ ಪೊಲೀಸ್ ಇಲಾಖೆಯ ದಿಟ್ಟ ಕಾರ್ಯವೈಖರಿಗೆ ಶಾಸಕ ದೊಡ್ಡನಗೌಡ ಹೆಚ್. ಪಾಟೀಲರಿಂದ ಭಾರೀ ಮೆಚ್ಚುಗೆ

ಕುಷ್ಟಗಿ, ಜುಲೈ 21: ಜಿಲ್ಲಾ ಪಂಚಾಯತ್ ಕೊಪ್ಪಳ ಹಾಗೂ ತಾಲೂಕು ಪಂಚಾಯತ್ ಕುಷ್ಟಗಿ ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಇಂದು (21/07/2026) ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ದೊಡ್ಡನಗೌಡ ಹೆಚ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪೊಲೀಸ್ ಇಲಾಖೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ವಿಶೇಷ ಪ್ರಶಂಸೆ ವ್ಯಕ್ತವಾಯಿತು. ಸಭೆಯಲ್ಲಿ ಕುಷ್ಟಗಿ ತಾಲೂಕಿನ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಭಾಗವಹಿಸಿ, ತಮ್ಮ ಇಲಾಖೆಗಳ ಪ್ರಗತಿ, ಸಾಧನೆ ಹಾಗೂ…

Read More

ಚೆನ್ನಮ್ಮ ದೇವೇಗೌಡರ ಪಾರ್ಥಿವ ಶರೀರ ಅಂತಿಮ ಯಾತ್ರೆ ಸಾಗುವ ಮಾರ್ಗ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಉಸಿರಾಟ ಸಮಸ್ಯೆಯಿಂದ ನಿಧನರಾಗಿದ್ದು, ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಬೆಂಗಳೂರಿನಿಂದ ಹಾಸನ ಜಿಲ್ಲೆ ಹೊಳೆನರಸೀಪುರಕ್ಕೆ ಪಾರ್ಥಿವ ಶರೀರ ಕೊಂಡೊಯ್ಯಲಿದ್ದು, ಸೋಮವಾರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.19-07-2026 ಭಾನುವಾರ, ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಬೆಂಗಳೂರಿನ ಪದ್ಮನಾಭನಗರದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ಪಾರ್ಥಿವ ಶರೀರವನ್ನು ಹೊಳೆನರಸೀಪುರಕ್ಕೆ ಕೊಂಡೊಯ್ಯಲಾಗುತ್ತದೆ. ನೆಲಮಂಗಲ ಕ್ರಾಸ್, ಸೋಲೂರು ಕ್ರಾಸ್, ಮರೂರು ಹ್ಯಾಂಡ್…

Read More

ರೋಹಿತ್ ಶರ್ಮಾ ನಿವೃತ್ತಿ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ BCCI!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವೇ ರೋಹಿತ್ ಶರ್ಮಾ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ ಎಂಬ ಊಹಾಪೋಹಗಳಿಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, “ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯವೇ ರೋಹಿತ್ ಶರ್ಮಾ ಅವರ ಕೊನೆಯ ಪಂದ್ಯ ಎಂಬ ಬಗ್ಗೆ ಯಾವುದೇ ಚರ್ಚೆಯೇ ನಡೆದಿಲ್ಲ. ರೋಹಿತ್ ಭಾರತದ ಏಕದಿನ ತಂಡದ ನಿಯಮಿತ ಸದಸ್ಯರಾಗಿದ್ದು, ತಂಡದ ಯೋಜನೆಗಳಲ್ಲಿ ಇರುವವರೆಗೂ ಭಾರತವನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ ಲಾರ್ಡ್ಸ್ ಪಂದ್ಯವೇ…

Read More

ಅಪ್ರಾಪ್ತೆಯರಿಗೆ ಗರ್ಭಧಾರಣೆ… ಒಂದೇ ಕುಟುಂಬದಲ್ಲಿ ಎರಡು ಪೋಕ್ಸೊ ಪ್ರಕರಣ ಬೆಳಕಿಗೆ – ಪೊಲೀಸ್ ಕಮಿಷನರ್ ಮಾಹಿತಿ…

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣ ಸಂಬಂಧಪಟ್ಟಂತೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದರು…. ನಗರದಲ್ಲಿ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆರಂಭದಲ್ಲಿ ಅಪ್ರಾಪ್ತ ಬಾಲಕಿ ಹೆರಿಗೆ ಮಾಡಿದ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು. ತನಿಖೆ ಮುಂದುವರಿಸಿದ ವೇಳೆ ಅದೇ ಕುಟುಂಬದ ಮತ್ತೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯೂ ಮಗುವಿಗೆ…

Read More

ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ ರಿವರ್ಸ್ ತೆಗೆದುಕೊಳ್ಳವಾಗ ದುರಂತ, ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಧಾರವಾಡದ ಬಸ್ ನಿಲ್ದಾಣದಲ್ಲಿ ದುರಂತವೊಂದು ನಡೆದಿದೆ, ಬಸ್ ರಿವರ್ಸ್ ತೆಗೆದುಕೊಳ್ಳುತ್ತಿದ್ದ ವೇಳೆ ಕಂಪೌಂಡ್ ಗೋಡೆ ಹಾಗೂ ಬಸ್ ಮಧ್ಯೆ ಸಿಲುಕಿದ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಕಳೆದ ದಿನ ಸಂಜೆ ನಡೆದಿದೆ. ಧಾರವಾಡ ತಾಲೂಕಿನ ಚಂದನಮಟ್ಟಿ ಗ್ರಾಮದ ಫಾತೀಮಾ ಬಾಬಾಜಾನ್ ಜಾಗೀರದಾರ್ (17) ಎಂಬ ವಿದ್ಯಾರ್ಥಿನಿಯೇ ಈ ಘಟನೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿಯಾಗಿದ್ದಾಳೆ. ಧಾರವಾಡದ ಮದೀನಾ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ ಫಾತೀಮಾ ಕಾಲೇಜು ಬಿಟ್ಟ ನಂತರ ಊರಿಗೆ ಹೋಗಲೆಂದು ಬಸ್ ನಿಲ್ದಾಣಕ್ಕೆ ಬಂದಿದ್ದಳು. ನಿಲ್ದಾಣದಲ್ಲಿ ಜನದಟ್ಟನೆ ಕೂಡ…

Read More

ಆಷಾಢ ಮಾಸದ ಮೊದಲ ಶುಕ್ರವಾರ: ಬೆಟ್ಟದ ತಾಯಿ ಚಾಮುಂಡಿಗೆ ಭಕ್ತಿಯ ನಮನ

ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ಭಕ್ತರ ಸಾಗರವೇ ಹರಿದುಬಂದಿತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಬೆಟ್ಟಕ್ಕೆ ಆಗಮಿಸಿದ್ದು, ದೇವಿಯನ್ನು **’ಲಕ್ಷ್ಮಿ ಅಲಂಕಾರ’**ದಲ್ಲಿ ಕಣ್ತುಂಬಿಕೊಂಡು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಮುಂಜಾನೆ 3.30ರಿಂದಲೇ ಬೆಟ್ಟ ಏರಲು ಅವಕಾಶ ಪೊಲೀಸ್ ಇಲಾಖೆ ಬೆಳಿಗ್ಗೆ 5 ಗಂಟೆಯಿಂದ ಕಾಲ್ನಡಿಗೆಯಲ್ಲಿ ಬೆಟ್ಟ ಏರಲು ಅವಕಾಶ ನೀಡುವುದಾಗಿ ತಿಳಿಸಿತ್ತು. ಆದರೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಮುಂಜಾನೆ ಸುಮಾರು 3.30 ಗಂಟೆಯಿಂದಲೇ ಮೆಟ್ಟಿಲುಗಳ ಮೂಲಕ ಬೆಟ್ಟ…

Read More

ಕನ್ನಡ ನಾಮಲಕ ಅಳವಡಿಕೆಗೆ

ಕೊಪ್ಪಳ : ಕುಷ್ಟಗಿ ತಾಲೂಕಿನ ಎನ್​ಎಚ್​ನಲ್ಲಿರುವ ವಿವಿಧ ಢಾಬಾಗಳಲ್ಲಿ ಕನ್ನಡ ನಾಮಲಕ ಅಳವಡಿಸುವಂತೆ ಕರವೇ ತಾಲೂಕು ಪದಾಧಿಕಾರಿಗಳು ಬುಧವಾರ ಜಾಗೃತಿ ಮೂಡಿಸಿದರು. ಕ್ಯಾದಿಗುಪ್ಪಾ ಕ್ರಾಸ್​ನಿಂದ ಆರಂಭಿಸಿ ವಿವಿಧ ಢಾಬಾಗಳಿಗೆ ತೆರಳಿ ಅರಿವು ಮೂಡಿಸಿದರು. ಬಹುತೇಕ ಕಡೆ ಕನ್ನಡ ನಾಮಲಕ ಇರಲಿಲ್ಲ. ರಾಜ್ಯ ಸರ್ಕಾರ ಕಡ್ಡಾಯ ಕನ್ನಡ ಆದೇಶ ಮಾಡಿದೆ. ವ್ಯಾಪಾರ, ವಾಣಿಜ್ಯ ಕೇಂದ್ರಗಳು ಸೇರಿದಂತೆ ವಿವಿಧ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಮಾಡಬೇಕು. ಅಂಗಡಿ ಮಾಲೀಕರಿಗೆ ಈ ಬಗ್ಗೆ ತಿಳಿಸಿ ಮೂರು ದಿನದೊಳಗೆ ಕಡ್ಡಾಯವಾಗಿ ಕನ್ನಡ ಅಕ್ಷರ…

Read More

ಟ್ರಂಪ್ ತಲೆಗೆ 10 ಮಿಲಿಯನ್ ಡಾಲರ್ ಇನಾಮು ಘೋಷಿಸಿದ ಇರಾಕ್ ಸಶಸ್ತ್ರ ಗುಂಪು

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹83 ಕೋಟಿ) ಬಹುಮಾನ ನೀಡುವುದಾಗಿ ಹೇಳಿಕೊಂಡಿರುವ ಇರಾಕ್‌ನ ಒಂದು ಸಶಸ್ತ್ರ ಗುಂಪು ಘೋಷಿಸಿದೆ ಎನ್ನುವ ವರದಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ತನ್ನನ್ನು “ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್” ಎಂದು ಗುರುತಿಸಿಕೊಂಡಿರುವ ಈ ಗುಂಪು ಜುಲೈ 16ರಂದು ಪ್ರಕಟಣೆ ಹೊರಡಿಸಿದೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ IRNA ಹಾಗೂ ರಷ್ಯಾದ ಸರ್ಕಾರಿ ಮಾಧ್ಯಮ RT ವರದಿಗಳನ್ನು ಉಲ್ಲೇಖಿಸಿ ಕೆಲವು…

Read More

ಶಿರಹಟ್ಟಿ:ರೈತರೊಂದಿಗೆ ಹೊಲ ಪರಿಶೀಲಿಸಿದ ರಾಜ್ಯ ರೈತೋದಯ ಹಸಿರು ಸೇನೆ ಅಧ್ಯಕ್ಷ ಬಿ.ಟಿ. ಚಂದ್ರಶೇಖರ್|NKS TV4

ಅಡರಕಟ್ಟಿ ಗ್ರಾಮದ ಹದ್ದಿನಲ್ಲಿ ಬರುವನೂರಾರು ಎಕರೆ ಜವಳು ಬಿದ್ದ ಜಮೀನನ್ನು ರೈತರೊಂದಿಗೆ ವೀಕ್ಷಿಸಿದರಾಜ್ಯ ರೈತೋದಯ ಹಸಿರು ಸೇನೆ ರಾಜ್ಯಾಧ್ಯಕ್ಷ ಬಿ. ಟಿ. ಚಂದ್ರಶೇಖರ್ ಹೌದು ಗದಗ ಜಿಲ್ಲೆಯ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ರೈತರ ಸಮಸ್ಯೆಗಳನ್ನು ಆಲಿಸುತ್ತಿರುವ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯಾಧ್ಯಕ್ಷರು1008 ಬಡ ಕುಟುಂಬಗಳ ಕಲ್ಯಾಣ ಕಲ್ಯಾಣೋತ್ಸವ ನೆರವೇರಿಸಿದ ಕಲ್ಯಾಣ ಪುರುಷ ಬಿ. ಟಿ. ಚಂದ್ರಶೇಖರ್ ಅವರು ಇಂದು ಬಹು ದಿನಗಳಿಂದ ಅಡರಕಟ್ಟಿ ಗ್ರಾಮದ ರೈತರ ಜಮೀನುಗಳಿಗೆ ಸೇರುತ್ತಿರುವ ಚರಂಡಿ ನೀರಿನಿಂದ ಹಾಳಾಗುತ್ತಿರುವ ರೈತರ…

Read More
error: Content is protected !!