ಒಂದೆಡೆ ಬರ, ಮತ್ತೊಂದೆಡೆ ಸಂಪುಟ ಗೊಂದಲ – ಡಿಸಿಎಂ ಪರಂ ದೂರವುಳಿದಿದ್ದೇಕೆ?
ಬೆಂಗಳೂರು : ಕರ್ನಾಟಕ (Karnataka) ರಾಜ್ಯದಲ್ಲಿ ಒಂದಡೆ ಬರದ (Draught) ಸಂಕಷ್ಟ ಮತ್ತು ಇನ್ನೊಂದೆಡೆ ಸಂಪುಟ ವಿಸ್ತರಣೆಯ (Cabinet Expansion) ಗೊಂದಲ ಮನೆಮಾಡಿವೆ. ಆದರೆ ಈ ಸಮಯದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ (G Parameshwar) ಈ ಎಲ್ಲ ತಾಕಲಾಟಗಳಿಂದ ದೂರವುಳಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂದು ಜಿ. ಪರಮೇಶ್ವರ್ ಜನ್ಮದಿನವೂ ಹೌದು. ಆದರೆ ಬರದ ಹಿನ್ನೆಲೆಯಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಜಿ. ಪರಮೇಶ್ವರ್ ನಿರ್ಧರಿಸಿದ್ದರು. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದ ಅವರು,…
