ಸಿಎಂ ಡಿಕೆಶಿ ಸಂಧಾನ ಸಕ್ಸಸ್ : ನಾಳೆಯಿಂದ್ಲೆ ನಾನು ಸ್ವೀಕರ್ ಆಗಿ ಕೆಲಸ ಮಾಡ್ತೀನಿ ಎಂದ ಟಿಬಿ ಜಯಚಂದ್ರ!
ಬೆಂಗಳೂರು: ಶಿರಾ ಕ್ಷೇತ್ರದ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರ ಅಸಮಾಧಾನ ಶಮನಗೊಳಿಸುವಲ್ಲಿ ಉಪಮುಖ್ಯಮಂತ್ರಿ (ಸಂಧಾನಕಾರ) ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಸಚಿವ ಸ್ಥಾನ ಸಿಗದ ಕಾರಣ ತೀವ್ರ ಅಸಮಾಧಾನಗೊಂಡಿದ್ದ ಜಯಚಂದ್ರ ಅವರ ನಿವಾಸಕ್ಕೆ ರಾತ್ರಿ ಖುದ್ದು ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಸುದೀರ್ಘ ಚರ್ಚೆ ನಡೆಸುವ ಮೂಲಕ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ಮಹತ್ವದ ಸಂಧಾನ ಸಭೆಯಲ್ಲಿ ನೂತನ ಸಚಿವ ಬಾಲಕೃಷ್ಣ ಹಾಗೂ ಶಾಸಕ ಡಾ. ರಂಗನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ವಿಧಾನಸಭೆ ಕಲಾಪ…
