Top News

ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯ: ಟೀಮ್ ಇಂಡಿಯಾದ ಸ್ಪಿನ್ ತಂತ್ರ ಮತ್ತು ಪ್ಲೇಯಿಂಗ್ ಇಲೆವೆನ್‌ನ ಅಸಲಿ ಲೆಕ್ಕಾಚಾರ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಏಕೈಕ ರೆಡ್-ಬಾಲ್ ಅಭ್ಯಾಸ ಪಂದ್ಯ ಇಂದು (ಆಗಸ್ಟ್ 7) ಕೊಲೊಂಬೋದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್‌ನಲ್ಲಿ ಆರಂಭವಾಗಲಿದೆ. ನಾಲ್ಕು ದಿನಗಳ ಈ ವಾರ್ಮ್-ಅಪ್ ಪಂದ್ಯವು ಟೆಸ್ಟ್ ತಂಡದ ಆಯ್ಕೆಯ ಗೊಂದಲಗಳಿಗೆ ಉತ್ತರ ನೀಡುವ ನಿರೀಕ್ಷೆಯಿದೆ. ಹೊಸದಾಗಿ ತಂಡಕ್ಕೆ ಸೇರ್ಪಡೆಯಾಗಿರುವ ಸಾರಂಶ್ ಜೈನ್ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದರೆ, ಜಸ್ಪ್ರೀತ್ ಬುಮ್ರಾ ಅಲಭ್ಯತೆಯಿಂದಾಗಿ ಆಕಿಬ್ ನಬಿ ತಂಡ ಸೇರಿಕೊಂಡಿದ್ದು, ವೇಗದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ತಂದಿದೆ. ಇಂದು ಜೈನ್ ಅವರ…

Read More

ವಿಧಾನ ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ (MLC) ಸದಸ್ಯೆಯಾಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಾಲ್ಕುವರೆ ವರ್ಷಗಳ ಕಾನೂನು ಹೋರಾಟ: 2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರು ಕೇವಲ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಸ್ಥಳೀಯ…

Read More

Karnataka Rains: ಕರಾವಳಿ ಜಿಲ್ಲೆಯಲ್ಲಿ ಹೆಚ್ಚು ಮಳೆ, ಯಾವ ಭಾಗದಲ್ಲಿ ಎಷ್ಟು?

ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಕಳೆದ ಮೂರ್ನಾಲ್ಕು ದಿನದಿಂದ ಮಳೆ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ವಿಟ್ಲಪಡನೂರಿನಲ್ಲಿ 99.5 ಮಿ. ಮೀ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ದೇವಲಮಕ್ಕಿಯಲ್ಲಿ 98.5 ಮಿ.ಮೀ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ…

Read More

ಡಿಲಿಮಿಟೇಶನ್‌ ಮಸೂದೆಗೆ ಡಿಎಂಕೆ ಷರತ್ತುಬದ್ಧ ಬೆಂಬಲ?

ನವದೆಹಲಿ,ಆ.7- ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಡಿಲಿಮಿಟೇಶನ್‌ (ಕ್ಷೇತ್ರ ಪುನರ್‌ವಿಂಗಡಣೆ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ದಕ್ಷಿಣ ಭಾರತದ ಪ್ರಮುಖ ಪ್ರಾದೇಶಿಕ ಪಕ್ಷವಾದ ತಮಿಳುನಾಡಿನ ಡಿಎಂಕೆ ಪಕ್ಷವು ಈ ಮಸೂದೆಗೆ ಬೆಂಬಲ ಸೂಚಿಸಲು ಕೇಂದ್ರ ಸರ್ಕಾರದ ಮುಂದೆ ಮೂರು ಪ್ರಮುಖ ಷರತ್ತುಗಳನ್ನು ವಿಧಿಸಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಸೀಟುಗಳ ಸ್ಥಗಿತ ವಿಸ್ತರಣೆ : 1971ರ ಜನಗಣತಿಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಸ್ಥಗಿತಗೊಳಿಸುವ ವ್ಯವಸ್ಥೆಯು 2027ಕ್ಕೆ ಕೊನೆಗೊಳ್ಳಲಿದೆ….

Read More

ಚಿಕ್ಕೋಡಿ ಪಟ್ಟಣದಲ್ಲಿ ಸುಗಮ ಸಂಚಾರ ಮರೀಚಿಕೆ; ರಸ್ತೆ ಗುಂಡಿಗಳಿಂದ ಜನರಿಗೆ ತೊಂದರೆ

ಚಿಕ್ಕೋಡಿ: ಜಿಲ್ಲಾ ಕೇಂದ್ರದ ಅರ್ಹತೆ ಹೊಂದಿರುವ ಪಟ್ಟಣದಲ್ಲಿ ಸುಗಮ ಸಂಚಾರ ಮರೀಚಿಕೆಯಾಗಿದೆ. ಪಟ್ಟಣದ ಹೃದಯಭಾಗವಾದ ಬಸವೇಶ್ವರ ವೃತ್ತದಲ್ಲಿ ಸಂಚರಿಸಲು ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ. ಇಲ್ಲಿನ ಬಹುತೇಕ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇನ್ನೊಂದೆಡೆ ಕೆಲವು ಕಡೆ ಬೇಕಾಬಿಟ್ಟಿಯಾಗಿ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿರುವುದು ಕಂಡುಬರುತ್ತದೆ. ಏಕಮುಖ ಸಂಚಾರ ಇದ್ದೂ ಇಲ್ಲದಂತಾಗಿದೆ. ಪಟ್ಟಣದ ಪ್ರತಿ ಪ್ರಮುಖ ರಸ್ತೆಯಲ್ಲೂ ಸವಾರರು ಗುಂಡಿ ತಪ್ಪಿಸಿ ವಾಹನ ಚಲಾಯಿಸಲು ಪ್ರಯಾಸ ಪಡುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳಲ್ಲಿ ಎಮ್ಮೆ, ದನ-ಕರುಗಳು ವಿರಮಿಸುತ್ತಿವೆ. ರಸ್ತೆಪಕ್ಕ ಮಳೆ…

Read More

ರೀಲ್ಸ್ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದ ಪತ್ನಿ; ಪತಿಗೆ ಊಟ ಕೊಡದೇ ಕಾಟ: ಹೆಂಡತಿಯನ್ನೇ ಕೊಲೆಗೈದ ಗಂಡ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಬಿಹಾರ ಮೂಲದ ರೀಮಾಕುಮಾರಿ ಎಂಬ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕುಂಬಳಗೋಡು ಬಳಿಯ ಗೇರುಪಾಳ್ಯದಲ್ಲಿ ಕಳೆದ ತಿಂಗಳು ಜುಲೈ 25ರಂದು ರೀಮಾಕುಮಾರಿ ಎಂಬ ಮಹಿಳೆಯ ಕೊಲೆಯಾಗಿತ್ತು. ಇದೀಗ ಭೀಕರ ಕೊಲೆ ಪ್ರಕರಣದ ಅಸಲಿ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಆರೋಪಿ, ಆಕೆಯ ಪತಿ ಧೀರಜ್ ಕುಮಾರ್ (24) ಎಂಬಾತನನ್ನು ಬಿಹಾರದಲ್ಲಿ ಬಂಧಿಸಿ ಕರೆತಂದ ಕುಂಬಳಗೋಡು ಠಾಣೆ ಪೊಲೀಸರು ಕೊಲೆಗೆ ಕಾರಣ ಬಹಿರಂಗಪಡಿಸಿದ್ದಾರೆ. ಬಿಹಾರ ಮೂಲದ ಧೀರಜ್ ಮತ್ತು…

Read More

ತನ್ವೀರ್‌ಗೆ ಸಚಿವ ಸ್ಥಾನ ತಪ್ಪಿದ್ದರಲ್ಲಿ ಸಿದ್ದರಾಮಯ್ಯ ಕೈವಾಡವಿಲ್ಲ: ಯತೀಂದ್ರ

ಮೈಸೂರು: ತಂದೆ ಸಿದ್ದರಾಮಯ್ಯ ಅವರು ಡಾ.ಎಚ್‌.ಸಿ. ಮಹದೇವಪ್ಪ‌ ಅವರಿಗೆ ಸಚಿವ ಸ್ಥಾನ ಕೊಡುವಂತೆ ಕೇಳಿದ್ದರು. ಆದರೆ, ಹೈಕಮಾಂಡ್‌ ದಲಿತ ಬಲಗೈಯಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಲೆಂದು ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಆಯ್ಕೆ ಮಾಡಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತಂದೆ ಶಿಫಾರಸು ಮಾಡಿದವರಲ್ಲಿ ಬಹುತೇಕರಿಗೆ ಸ್ಥಾನ ಸಿಕ್ಕಿದೆ. ಅವರು ನೀಡಿದ್ದ ಎರಡು ಪಟ್ಟಿಯಲ್ಲೂ ಮಹದೇವಪ್ಪ‌ ಅವರ ಹೆಸರಿತ್ತಾದರೂ ಹೈಕಮಾಂಡ್ ಒಪ್ಪಿಲ್ಲ’ ಎಂದರು. ‘ಬಿ.ಝಡ್. ಜಮೀರ್ ಅಹಮದ್ ಖಾನ್…

Read More

88 ಕೋಟಿ ರೂ ವಂಚನೆ ಪ್ರಕರಣ: ಪರಾರಿಯಾಗಿದ್ದ ಆರೋಪಿ ಪತ್ನಿಯನ್ನು ಭಾರತಕ್ಕೆ ಕರೆತಂದ ಸಿಬಿಐ

ನವದೆಹಲಿ-ಸುಮಾರು 88 ಕೋಟಿ ರೂಪಾಯಿ ಹೂಡಿಕೆ ವಂಚನೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅವಿನಾಶ್ ರಾಥೋಡ್ ಅವರ ಪತ್ನಿ ವಿಶಾಖಾ ರಾಥೋಡ್ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಿಂದ ಭಾರತಕ್ಕೆ ಯಶಸ್ವಿಯಾಗಿ ವಾಪಸ್ ಕರೆತರಲಾಗಿದೆ. ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ವಿಶಾಖಾ ರಾಥೋಡ್ ವಿರುದ್ಧ ಇಂಟರ್‌ಪೋಲ್ ‘ರೆಡ್ ನೋಟಿಸ್’ ಜಾರಿಯಾಗಿದ್ದ ಹಿನ್ನೆಲೆಯಲ್ಲಿ, ಸಿಬಿಐ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಗೃಹ ಸಚಿವಾಲಯದ ಸಮನ್ವಯದ ಕಾರ್ಯಾಚರಣೆಯಿಂದ ಆಗಸ್ಟ್ 3ರಂದು ಅವರನ್ನು ಭಾರತಕ್ಕೆ ಕರೆತರಲಾಯಿತು….

Read More

ಬೆಂಗಳೂರು ನಮ್ಮ ಮೆಟ್ರೋ ಹೊಸೂರಿಗೆ ವಿಸ್ತರಣೆ ? ಕೇಂದ್ರದೊಂದಿಗೆ ಚರ್ಚೆ ಆರಂಭಿಸಿದ ತಮಿಳುನಾಡು ಸರ್ಕಾರ

Bengaluru Metro: ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಂಗಳೂರಿನಿಂದ ಆಗುವ ಲಾಭ – ಲೆಕ್ಕಾಚಾರದ ಮೇಲೆ ತಮಿಳುನಾಡು ಮತ್ತೊಮ್ಮೆ ಕಣ್ಣಿಟ್ಟಿದೆ. ಬೆಂಗಳೂರಿಗೆ ಪೈಪೋಟಿ ನೀಡುವ ಹಲವು ಯೋಜನೆಗಳನ್ನು ಈಗಾಗಲೇ ತಮಿಳುನಾಡು ಈ ಹಿಂದಿನ ಸರ್ಕಾರ ದ್ರಾವಿಣ ಮುನ್ನೇತ್ರ ಕಳಗಂ ಪಕ್ಷವು ಪ್ರಾರಂಭಿಸಿತ್ತು.ಇದೀಗ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ತಮಿಳಗ ವೆಟ್ರಿ ಕಳಗಂ ಪಕ್ಷವು ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ಮೇಲೆ ಕಣ್ಣಿಟ್ಟಿದೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರ್ಯಾಯವಾಗಿ ಹೊಸೂರಿನಲ್ಲಿ ಹೊಸ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು…

Read More

ಅತ್ಯಾಚಾರ ಪ್ರಕರಣ: ‘ತೆಹೆಲ್ಕಾ’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10ವರ್ಷ ಜೈಲು

ಗೋವಾ: ಕಿರಿಯ ಮಹಿಳಾ ಸಹೋದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತೆಹೆಲ್ಕಾ ನಿಯತಕಾಲಿಕೆ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿ 2021ರಲ್ಲಿ ಗೋವಾದ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತಳ್ಳಿ ಹಾಕಿ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿಗಳಾದ ನೀಲಾ ಗೋಖಲೆ ಮತ್ತು ಅಮಿತ್ ಜಾಮ್‌ಸಂಡೇಕರ್ ಅವರಿದ್ದ ವಿಭಾಗೀಯ ಪೀಠ ಗುರುವಾರ ಬೆಳಗ್ಗೆ ತಪ್ಪಿತಸ್ಥ ಎಂದು ತೀರ್ಪು…

Read More
error: Content is protected !!