ಎರಡು ಮಹತ್ವದ ಮಸೂದೆಗಳ ಮಂಡನೆ ಗೊಂದಲದಲ್ಲಿ ಕೇಂದ್ರ ಸರ್ಕಾರ
ನವದೆಹಲಿ,ಆ.6- ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಎರಡು ಮಹತ್ವದ ರಾಜಕೀಯ ಅಜೆಂಡಾಗಳಾದ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ ತಿದ್ದುಪಡಿ ಮಸೂದೆ-2026 ಹಾಗೂ ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಶನ್) ಸಂಬಂಧಿತ ಸಾಂವಿಧಾನಿಕ ತಿದ್ದುಪಡಿ ಮಸೂದೆ ಈಗ ಪರಸ್ಪರ ರಾಜಕೀಯವಾಗಿ ಅವಿನಾಭಾವವಾಗಿ ಜೋಡಿಕೊಂಡಿವೆ.ಸರ್ಕಾರವು ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯನ್ನು ಮುಂದಿಡಬೇಕೇ ಅಥವಾ ಡಿಲಿಮಿಟೇಶನ್ ಮಸೂದಿಗೆ ಅಗತ್ಯ ರಾಜಕೀಯ ಬೆಂಬಲವನ್ನು ಮೊದಲು ಭದ್ರಪಡಿಸಬೇಕೇ ಎಂಬ ಗೊಂದಲದಲ್ಲಿ ಸಿಲುಕಿರುವ ಚಿತ್ರಣ ಕಂಡುಬರುತ್ತಿದೆ.ಸಂಸತ್ತಿನಲ್ಲಿ ಸಾಮಾನ್ಯ ಕಾನೂನಾದ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಗೆ ಸರಳ ಬಹುಮತ ಸಾಕಾಗುತ್ತದೆ. ಆದರೆ…
